Posts

Bigg Boss 10: "ನನ್ನಿಂದಲೇ ಕಾರ್ತಿಕ್, ಸಂಗೀತಾ, ಪ್ರತಾಪ್ ಟಾಪ್‌ 3ಗೆ ಹೋದ್ದು"- ವಿನಯ್ ಗೌಡ

Image
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಗೌಡ ಮೂರನೇ ರನ್ನರ್ ಅಪ್ ಆಗಿ ಹೊರಬಿದ್ದಿದ್ದಾರೆ. ಅವರ ನೇರಮಾತು, ನಿಷ್ಠುರದ ನಡತೆ, ಏಟಿಗೆ ಎದುರೇಟು ಕೊಟ್ಟು ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಅಬ್ಬರಿಸಿದ್ದರು. ಮನೆಯೊಳಗಿದ್ದ ಬಿಗ್‌ಬಾಸ್ ಸ್ಪರ್ಧಿಗಳಿಗೆ ನಿರ್ಭಯವಾಗಿ ಟಕ್ಕರ್ ಕೊಡುತ್ತಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 10ರ ಫಿನಾಲೆ ತಲುಪಿದ ವಿನಯ್ ಗೌಡ ನಿರೀಕ್ಷೆ ಮಾಡದ ರೀತಿ ಹೊರಬಿದ್ದಿದ್ದರು. ಬಿಗ್‌ಬಾಸ್‌ನಿಂದ ಹೊರಬರುತ್ತಿದ್ದಂತೆ ವಿನಯ್ ಗೌಡ ಪರೋಕ್ಷವಾಗಿ ಅಸಮಧಾನ ಹೊರಹಾಕಿದ್ದರು. ಈಗ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ವಿನಯ್ ಗೌಡ ಓಪನ್ ಆಗಿ ಮಾತಾಡಿದ್ದಾರೆ. "ಬಿಗ್‌ಬಾಸ್ ಮನೆಯಿಂದ ಮೂರನೇ ರನ್ನರ್ ಅಪ್‌ ಆಗಿ ಹೊರಗೆ ಬಂದಿದ್ದೀನಿ. ಚೆನ್ನಾಗಿ ಅನಿಸುತ್ತಿದೆ ಎಂದು ಖಂಡಿತ ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ, ನಾನು ಕನಿಷ್ಠ ಪಕ್ಷ ಟಾಪ್‌ 3ನಲ್ಲಿ ಇರುತ್ತೇನೆ ಎಂದುಕೊಂಡಿದ್ದೆ. ಆದರೆ, ನಮ್ಮ ಜನರೇ ವೋಟ್ ಮಾಡಿರುವುದು. ಇಲ್ಲಿ ತನಕ ಕರೆದುಕೊಂಡು ಬಂದವರಿಗೆ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ." ಎಂದು ವಿನಯ್ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಟಾಪ್‌-2ಗೆ ಪ್ರತಾಪ್ ಅರ್ಹ ಅಲ್ಲ, ಶೋ ಹೇಗೆ ನಿಭಾಯಿಸಿದ್ರಿ? ಅಭಿಮಾನಿ ಪ್ರಶ್ನೆಗೆ ಕಿಚ್ಚ ಏನಂದ್ರು? ಬಿಗ್‌ಬಾಸ್ ಗೆಲ್ಲದೇ ಇದ್ದಿದ್ದಕ್ಕೆ ಬೇಸರ ಹೊರಹಾಕಿದ್ದಾರೆ. ಆದರೆ, ಜನರ ದೃಷ್ಟಿಯಲ್ಲಿ ಚಾಂಪಿಯನ್ ಆಗಿದ್ದಾಗಿ ಖುಷಿ ವ್ಯಕ್ತಪಡಿದ್ದಾರೆ. "...